ಇದು ವೇತನದಾರರ ಸಂಬಳ, ಉಳಿತಾಯ ಮತ್ತು ತೆರಿಗೆ ಪಾವತಿ ವಿಧಾನದ ಮೇಲೆ ದೊಡ್ಡ ಪ್ರಭಾವ ಬೀರಲಿದೆ.
ಹೊಸ ನಿಯಮಗಳು ಇಲ್ಲಿವೆ:
1. ಸ್ಟ್ಯಾಂಡರ್ಡ್ ಡಿಡಕ್ಷನ್ ಏರಿಕೆ (Standard Deduction)
ವೇತನದಾರರಿಗೆ ಮತ್ತು ಪಿಂಚಣಿದಾರರಿಗೆ ಈ ಹೊಸ ಕಾಯ್ದೆಯಡಿ ದೊಡ್ಡ ಸಮಾಧಾನ ಸಿಕ್ಕಿದೆ. ಹೊಸ ನಿಯಮದ ಪ್ರಕಾರ, ತೆರಿಗೆದಾರರು ತಮ್ಮ ಒಟ್ಟು ಆದಾಯದಿಂದ ನೇರವಾಗಿ 75,000 ರೂ. ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಇದು ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ಮಾಡಿ, ಕೈಗೆ ಸಿಗುವ ನಿವ್ವಳ ಸಂಬಳವನ್ನು ಹೆಚ್ಚಿಸುತ್ತದೆ.
2. ಊಟದ ಕೂಪನ್ (Meal Vouchers) ಮೇಲಿನ ವಿನಾಯಿತಿ
ಹೊಸ ತೆರಿಗೆ ಪದ್ಧತಿಯಲ್ಲಿ ಮೀಲ್ ವೋಚರ್ಗಳ ಮಿತಿಯನ್ನು ಹೆಚ್ಚಿಸಲಾಗಿದೆ. ಪ್ರತೀ ಹೊತ್ತಿನ ಊಟಕ್ಕೆ 200 ರೂ. ಅಥವಾ ಅದಕ್ಕಿಂತ ಕಡಿಮೆ ಮೌಲ್ಯದ ವೋಚರ್ಗಳಿಗೆ ತೆರಿಗೆ ಇರುವುದಿಲ್ಲ. ತಿಂಗಳಿಗೆ 22 ಕೆಲಸದ ದಿನಗಳನ್ನು ಲೆಕ್ಕ ಹಾಕಿದರೆ, ದಿನಕ್ಕೆ ಎರಡು ಹೊತ್ತಿನ ಊಟದಂತೆ ತಿಂಗಳಿಗೆ ಸುಮಾರು 8,800 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದು ಮಧ್ಯಮ ವರ್ಗದ ಉದ್ಯೋಗಿಗಳಿಗೆ ದೈನಂದಿನ ವೆಚ್ಚದ ದೃಷ್ಟಿಯಿಂದ ಸಹಕಾರಿಯಾಗಿದೆ.
3. ಉಡುಗೊರೆಗಳ ಮಿತಿ ಹೆಚ್ಚಳ (Gifts)
ಹಬ್ಬಗಳು ಅಥವಾ ವಿಶೇಷ ಸಂದರ್ಭಗಳಲ್ಲಿ ಕಂಪನಿಗಳು ನೀಡುವ ಉಡುಗೊರೆಗಳ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಹಿಂದೆ 5,000 ರೂ. ಇದ್ದ ಮಿತಿಯನ್ನು ಈಗ 15,000 ರೂ. ಗೆ ಏರಿಸಲಾಗಿದೆ. ಹಳೆಯ ಮತ್ತು ಹೊಸ ಎರಡೂ ತೆರಿಗೆ ಪದ್ಧತಿಗಳಿಗೂ ಇದು ಅನ್ವಯಿಸುತ್ತದೆ.
4. ಕಾರು ಬಳಕೆ ಮತ್ತು ಸಾರಿಗೆ ಭತ್ಯೆ
ಉದ್ಯೋಗಿಯು ತನ್ನ ಸ್ವಂತ ಕಾರನ್ನು ಕಚೇರಿ ಮತ್ತು ವೈಯಕ್ತಿಕ ಕೆಲಸಕ್ಕೆ ಬಳಸುವಾಗ ಕಂಪನಿ ಭರಿಸುವ ವೆಚ್ಚದ ಮೇಲೆ ಈ ಕೆಳಗಿನಂತೆ ತೆರಿಗೆ ವಿನಾಯಿತಿ ಇರುತ್ತದೆ:
1.6 ಲೀಟರ್ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯ: ಮಾಲೀಕರು ಪಾವತಿಸುವ ಒಟ್ಟು ಮೊತ್ತದಲ್ಲಿ ತಿಂಗಳಿಗೆ 5,000 ರೂ. (ಡ್ರೈವರ್ ಇದ್ದರೆ ಹೆಚ್ಚುವರಿ 3,000 ರೂ.) ವಿನಾಯಿತಿ ಸಿಗಲಿದೆ.
1.6 ಲೀಟರ್ಗಿಂತ ಹೆಚ್ಚಿನ ಇಂಜಿನ್ ಸಾಮರ್ಥ್ಯ: ತಿಂಗಳಿಗೆ 7,000 ರೂ. (ಡ್ರೈವರ್ ಇದ್ದರೆ ಹೆಚ್ಚುವರಿ 3,000 ರೂ.) ಮಿನಾಯಿತಿ ಲಭ್ಯವಿದೆ.
5. ಗೃಹ ಸಾಲದ ಬಡ್ಡಿ (Home Loan Interest)
ಹೊಸ ತೆರಿಗೆ ಪದ್ಧತಿಯಲ್ಲಿ ಬಾಡಿಗೆಗೆ ನೀಡಿದ ಆಸ್ತಿಯ ಮೇಲೆ ಪಾವತಿಸುವ ಗೃಹ ಸಾಲದ ಬಡ್ಡಿಯನ್ನು ಸೆಕ್ಷನ್ 24(b) ಅಡಿಯಲ್ಲಿ ವಿನಾಯಿತಿಯಾಗಿ ಪಡೆಯಬಹುದು. ಇದರಿಂದ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ಮತ್ತು ಬಾಡಿಗೆ ಆದಾಯ ಪಡೆಯುವವರಿಗೆ ತೆರಿಗೆ ಹೊರೆ ಕಡಿಮೆಯಾಗಲಿದೆ.
ಗಮನಿಸಿ: ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಳ್ಳುವವರು ಹೆಚ್ಚಿನ ಮೂಲ ವಿನಾಯಿತಿ ಪಡೆಯುತ್ತಾರೆ. ಆದರೆ, ಹಳೆಯ ಪದ್ಧತಿಯಲ್ಲಿ ಲಭ್ಯವಿದ್ದ HRA, 80C, 80D ನಂತಹ ಹಲವಾರು ವಿನಾಯಿತಿಗಳನ್ನು ಇವರು ತ್ಯಜಿಸಬೇಕಾಗುತ್ತದೆ.














































































