ಮಂಗಳವಾರ, ಅಕ್ಟೋಬರ್ 14, 2025

world 🌎 students Day

ಅದೇ ರೀತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. APJ Abdul Kalam) ಅವರು ಸಹ  ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಪರಿವರ್ತಿಸುವ ಮಾಂತ್ರಿಕ ಶಕ್ತಿ ಎಂದು ನಂಬಿದ್ದವರು. ಜೊತೆಗೆ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದ ಅವರು ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ಹಾಗೂ ತಮ್ಮ ಸ್ಪೂರ್ತಿದಾಯಕ ಮಾತಿನ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಕಲಾಂ ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಈ ನಿಟ್ಟಿನಲ್ಲಿ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್‌ 15 ರಂದು ವಿಶ್ವ ವಿದ್ಯಾರ್ಥಿಗಳ (World Students’ Day) ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸವೇನು?

ಡಾ. ಕಲಾಂ ಒಬ್ಬ ವಿಜ್ಞಾನಿ ಮತ್ತು ಭಾರತದ ಮಿಸೈಲ್ ಮ್ಯಾನ್  ಮಾತ್ರವಲ್ಲದೆ, ಯುವಜನರು ದೊಡ್ಡ ಕನಸು ಕಾಣಲು ಮತ್ತು ಅವುಗ ಳನ್ನು ಸಾಧಿಸಲು ಯಾವಾಗಲೂ ಪ್ರೇರೇಪಿಸುವ ಶಿಕ್ಷಕರೂ ಆಗಿದ್ದರು. ಅವರ ಬೋಧನಾ ಪರಂಪರೆ ಮತ್ತು ಅವರು ಸ್ಥಾಪಿಸಿದ ಆದರ್ಶಗಳನ್ನು ಗೌರವಿಸಲು ವಿಶ್ವಸಂಸ್ಥೆಯು ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು. ಮೊದಲ ಬಾರಿಗೆ 2010 ರಲ್ಲಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 79ನೇ ಜನ್ಮದಿನದಂದು  ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ  ಮಹತ್ವದ ಕೊಡುಗೆಯನ್ನು ಗೌರವಿಸಲು ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ  ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವವೇನು?

  • ಈ ದಿನವು ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಮಗೆ ನೆನಪಿಸುತ್ತದೆ.
  • ಸರಿಯಾದ ಅವಕಾಶಗಳನ್ನು ನೀಡಿದರೆ, ವಿದ್ಯಾರ್ಥಿಗಳು ವಿಶ್ವವನ್ನು ಬದಲಾಯಿಸುವವರಾಗಬಹುದು. ಆದ್ದರಿಂದ, ಈ ದಿನವು ಶಿಕ್ಷಣವು ಪ್ರತಿಯೊಬ್ಬರ ಹಕ್ಕು ಮತ್ತು ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಬೇಕು ಎಂಬುದನ್ನು ನೆನಪಿಸುತ್ತದೆ.
  • ಸಮಾನ ಶೈಕ್ಷಣಿಕ ಅವಕಾಶಗಳನ್ನು ಉತ್ತೇಜಿಸುವುದು, ನಾವೀನ್ಯತೆಯ ಮನೋಭಾವವನ್ನು ಪ್ರೋತ್ಸಾಹಿಸುವುದು ಮತ್ತು ವಿದ್ಯಾರ್ಥಿಗಳ ಕೊಡುಗೆಗಳನ್ನು ಗುರುತಿಸುವುದು ವಿಶ್ವ ವಿದ್ಯಾರ್ಥಿ ದಿನದ ಉದ್ದೇಶವಾಗಿದೆ.
  • ಅಲ್ಲದೆ ಶಿಕ್ಷಣವು ವ್ಯಕ್ತಿಗಳನ್ನು ಮಾತ್ರವಲ್ಲದೆ ಇಡೀ ಸಮಾಜಗಳನ್ನು ಪರಿವರ್ತಿಸುತ್ತದೆ ಎಂಬ ಡಾ. ಕಲಾಂ ಅವರ ನಂಬಿಕೆಯನ್ನು ಈ ದಿನ ಸ್ಮರಿಸುತ್ತದೆ.
  • ಈ ದಿನದಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಹತ್ವದ ಪಾತ್ರ, ಸಾಧನೆಗಳು ಮತ್ತು ವಿದ್ಯಾರ್ಥಿಗಳಿಗೆ ಅವರು ನೀಡಿದ ಸ್ಫೂರ್ತಿಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.
  • ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಈ ದಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ. ಅಲ್ಲದೆ ಮಕ್ಕಳಿಗೆ ಡಾ. ಕಲಾಂ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪರ್ವ: ಕಂಡಕ್ಟರ್, FDA/SDA ಸೇರಿ 320ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ

ಈ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ (HK) ವೃಂದದಡಿ ನೇರ ನೇಮಕಾತಿ ಮೂಲಕ ಮಾಡಲಾಗುತ್ತಿದೆ.

ಐದು ಸಂಸ್ಥೆಗಳಲ್ಲಿ ನೇಮಕಾತಿ:

ಒಟ್ಟು ಐದು ಸರ್ಕಾರಿ ಸಂಸ್ಥೆಗಳು/ನಿಗಮ/ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅವುಗಳೆಂದರೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ಸ್‌ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.

ಹುದ್ದೆಗಳ ವಿವರ ಮತ್ತು ಅರ್ಹತೆಗಳು:

ಕೆಕೆಆರ್‌ಟಿಸಿ (KKRTC) 253 ಹುದ್ದೆಗಳು: ಇದರಲ್ಲಿ 240 ನಿರ್ವಾಹಕ (Conductor) ಹುದ್ದೆಗಳು ಮತ್ತು 13 ಸಹಾಯಕ ಲೆಕ್ಕಿಗ ಹುದ್ದೆಗಳು ಸೇರಿವೆ. ನಿರ್ವಾಹಕ ಹುದ್ದೆಗೆ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಮಾನ್ಯತೆ ಪಡೆದ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಕಡ್ಡಾಯವಾಗಿರುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA): ಪ್ರಥಮ ದರ್ಜೆ ಸಹಾಯಕರು (FDA) (ಪದವಿ) 1 ಹುದ್ದೆ ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) (ಪಿಯುಸಿ ಅಥವಾ ತತ್ಸಮಾನ) 6 ಹುದ್ದೆಗಳು.

ತಾಂತ್ರಿಕ ಶಿಕ್ಷಣ ಇಲಾಖೆ: ಪ್ರಥಮ ದರ್ಜೆ ಸಹಾಯಕರು (FDA) 16 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) 23 ಹುದ್ದೆಗಳು ಲಭ್ಯವಿವೆ.

ಇತರೆ ಹುದ್ದೆಗಳು: ಕೆಎಸ್‌ಡಿಎಲ್‌ನಲ್ಲಿ 14 ಹುದ್ದೆಗಳು (ಮಾರುಕಟ್ಟೆ ಕಿರಿಯ ಅಧಿಕಾರಿ-1, ಮಾರಾಟ ಪ್ರತಿನಿಧಿ-04, ಆಪರೇಟರ್-09) ಲಭ್ಯವಿದೆ. ಇನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯ (ಆರ್‌ಜಿಎಚ್‌ಎಸ್‌ಯು)ನಲ್ಲಿ 4 ಹುದ್ದೆಗಳು (ಜೂನಿಯರ್ ಪ್ರೋಗ್ರಾಮರ್-1, ಸಹಾಯಕ-1, ಕಿರಿಯ ಸಹಾಯಕ-2) ಲಭ್ಯವಿದೆ.

ಪ್ರಮುಖ ದಿನಾಂಕಗಳು ಮತ್ತು ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 9, 2025 ರಂದು ಪ್ರಾರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10, 2025 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಗೆ ನವೆಂಬರ್ 11, 2025 ಅಂತಿಮ ದಿನವಾಗಿದೆ.

ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500/- ಶುಲ್ಕ ನಿಗದಿಪಡಿಸಲಾಗಿದೆ. ವಿಶೇಷ ಚೇತನರಿಗೆ 250 ರೂ. ನಿಗದಿಪಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ, ಪ್ರತಿ ಹೆಚ್ಚುವರಿ ಹುದ್ದೆಗೆ ₹100/- ಅರ್ಜಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಬೇಕು.

ವಯೋಮಿತಿ ಮತ್ತು ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಗಳಿಗೆ 41 ವರ್ಷಗಳಾಗಿವೆ. ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳವರೆಗೆ ಇರುತ್ತದೆ.

ಆಯ್ಕೆಯು ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯುತ್ತದೆ. ಅರ್ಹತೆಗಾಗಿ ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 35 ರಷ್ಟು (ಕೆಕೆಆರ್‌ಟಿಸಿ ಹುದ್ದೆಗಳಿಗೆ ಶೇಕಡಾ 30) ಅಂಕಗಳನ್ನು ಗಳಿಸುವುದು ಕಡ್ಡಾಯ. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ (1/4) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್ (https://cetonline.karnataka.gov.in/VAOResult/DigilockerReg.aspx) ಗೆ ಭೇಟಿ ನೀಡಬಹುದಾಗಿದೆ.

ದ್ವಿತೀಯ PUC' ಪರೀಕ್ಷೆ-1ಕ್ಕೆ ಹೊಸ ವಿದ್ಯಾರ್ಥಿಗಳ ನೋಂದಣಿ : ಪರೀಕ್ಷಾ ಮಂಡಳಿ ಮಹತ್ವದ ಆದೇಶ

1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 08-10-2025 ರಿಂದ 31-10-2025 ರವರೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.

2) ಮಾಹಿತಿಗಳನ್ನು ಮಂಡಲಿಯ ಜಾಲತಾಣದ https://kseeb.karnataka.gov.in ರಲ್ಲಿನ PU EXAM PORTAL ಕಾಲೇಜು ಲಾಗಿನ್ ಮುಖಾಂತರ ಅಪ್ಲೋಡ್ ಮಾಡುವುದು.

3) ಪ್ರಾಂಶುಪಾಲರು ಮಂಡಲಿಯ ಕಾಲೇಜು ಲಾಗಿನ್ ನಲ್ಲಿ ಈಗಾಗಲೇ ಸೃಜಿಸಲಾಗಿರುವ Username and Password ಬಳಸಿ ONLINE ನೋಂದಣಿ ಕಾರ್ಯ ಮಾಡಬಹುದಾಗಿದೆ.

4) ನೋಂದಣಿ ಕಾರ್ಯವನ್ನು ವಿದ್ಯಾರ್ಥಿಗಳ SATS NUMBER ಬಳಸಿ ಮಾಡುವುದು.

5) ಪ್ರತಿ ವಿದ್ಯಾರ್ಥಿಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) Jpeg, format ನಲ್ಲಿ ಅವರ SATS ನೋಂದಣಿ ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.

ಉದಾ:- ಅಭ್ಯರ್ಥಿಯ SATS ಸಂಖ್ಯೆಯು 12345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P12345678 ಎಂದು soft copy ಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು.

6) ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳ ಬಹುತೇಕ ಮಾಹಿತಿಗಳನ್ನು SATS ಡೇಟಾಬೇಸ್ ನಿಂದ ಪಡೆಯಲಾಗುವುದರಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಲಿಂಗ ಮತ್ತು ಮಾಧ್ಯಮ, ಸಂಯೋಜನೆ ಹಾಗೂ ವಿಷಯ ಇವುಗಳಲ್ಲಿ ಯಾವುದೇ ತಿದ್ದುಪಡಿಗಳು ಇದ್ದಲ್ಲಿ, ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಮೊದಲು SATS ಡೇಟಾಬೇಸ್ನಲ್ಲಿ ಶಾಲಾ ಶಿಕ್ಷಣ (ಪಿ.ಯು. ಇಲಾಖೆ) 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-12 ಇಲ್ಲಿ ತಿದ್ದುಪಡಿ ಮಾಡಿಸಿದ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ PU EXAM PORTAL ಕಾಲೇಜು ಲಾಗಿನ್ನಲ್ಲಿ UPDATE LATEST DATA FROM SATS ಮಾಡಿದ ನಂತರ ಪರಿಷ್ಕೃತ ಮಾಹಿತಿಯನ್ನು ಪರಿಶೀಲಿಸಿ ತಾಳೆ ಹೊಂದಿದ ನಂತರ SUBMIT ಮಾಡುವುದು.

7) SATS ನಲ್ಲಿ ತಿದ್ದುಪಡಿ ಮಾಡಿಸುವಾಗ ಎಸ್.ಎಸ್.ಎಲ್.ಸಿ./10ನೇ ತರಗತಿ ಅಂಕಪಟ್ಟಿಯ ವಿವರಗಳ ಜೊತೆ ಪರಿಶೀಲಿಸುವುದು.

ಶನಿವಾರ, ಅಕ್ಟೋಬರ್ 11, 2025

www.ksoumysuru.ac.in

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯೂ, ಬಿ.ಲಿಬ್ ಐಎಸ್ಸಿ, ಎಂಎ, ಎಂ,ಕಾಂ, ಎಂಬಿಎ, ಎಂಸಿಎ, ಎಂಎಸ್ಸಿ, ಎಂಎಸ್‌ಡಬ್ಲ್ಯೂ, ಎಂ.ಲಿಬ್ ಐಎಸ್‌ಸಿ, ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.

ಅಭ್ಯರ್ಥಿಗಳು ವಿವಿಯ ವೆಬ್‌ಸೈಟ್ www.ksoumysuru.ac.in ನಲ್ಲಿ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ವಿವಿಯ ರಾಮನಗರ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಿಶೇಷ ರಿಯಾಯಿತಿ: ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ, ರಕ್ಷಣಾ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ, ಆಟೊ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮತ್ತು ಕೆಎಸ್‌ಆರ್‌ಟಿಸಿ/ಬಿಎಂಟಿಸಿ ನೌಕರರಿಳಿಗೆ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ ಸಿಗಲಿದೆ (ಯುಜಿ ಮತ್ತು ಪಿ,ಜಿ ಪದವಿ ಪ್ರೋಗ್ರಾಂ ಮಾತ್ರ).

ಕೋವಿಡ್‌ನಿಮದ ಮೃತರಾದ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರವೇಶ ಬಯಸುವ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಶೇ 50ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಇಡಿ ಮತ್ತು ಎಂಬಿಎ ಕಾರ್ಯಕ್ರಮಗಳಿಗೆ ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ತೃತೀಯ ಲಿಂಗ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಸಿಗಲಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ ಎಸ್‌ಎಸ್‌ಪಿ ಮುಖಾಂತರ ವಿದ್ಯಾರ್ಥಿವೇತನ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ, ನಂ. 103, 'ಇ' ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ಮೊಬೈಲ್ ಸಂಖ್ಯೆ:-9448668880, 8861732487, 8618501602, 9743184848 ಹಾಗೂ 9900356226 ಸಂಪರ್ಕಿಸಬೇಕು ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ ಎಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ `1650' ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್

ಸದರಿ ಪತ್ರದಲ್ಲಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ (275 ಕಲ್ಯಾಣ ಕರ್ನಾಟಕ ಮತ್ತು 1375 ಕಲ್ಯಾಣ ಕರ್ನಾಟಕೇತರ ಹುದ್ದೆಗಳು) ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು ಹಾಗೂ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ ಆ ರಲ್ಲಿ ಒದಗಿಸಲಾಗಿತ್ತು.

ಸದರಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮರು ಹಂಚಿಕೆಮಾಡಲಾಗಿದ್ದು, ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರವನ್ನು ಅನುಬಂಧ-ಅರಲ್ಲಿ ಲಗತ್ತಿಸಿದೆ. ಹಾಗೂ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳವಂತೆ ಕೋರಲಾಗಿದೆ.

SBI scholarship

http://somalinggovernmentemployees76.blogspot.com/2025/10/blog-post_21.html

BCMHOSTEL2077