ಈ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ (HK) ವೃಂದದಡಿ ನೇರ ನೇಮಕಾತಿ ಮೂಲಕ ಮಾಡಲಾಗುತ್ತಿದೆ.
ಐದು ಸಂಸ್ಥೆಗಳಲ್ಲಿ ನೇಮಕಾತಿ:
ಒಟ್ಟು ಐದು ಸರ್ಕಾರಿ ಸಂಸ್ಥೆಗಳು/ನಿಗಮ/ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅವುಗಳೆಂದರೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ಸ್ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.
ಹುದ್ದೆಗಳ ವಿವರ ಮತ್ತು ಅರ್ಹತೆಗಳು:
ಕೆಕೆಆರ್‌ಟಿಸಿ (KKRTC) 253 ಹುದ್ದೆಗಳು: ಇದರಲ್ಲಿ 240 ನಿರ್ವಾಹಕ (Conductor) ಹುದ್ದೆಗಳು ಮತ್ತು 13 ಸಹಾಯಕ ಲೆಕ್ಕಿಗ ಹುದ್ದೆಗಳು ಸೇರಿವೆ. ನಿರ್ವಾಹಕ ಹುದ್ದೆಗೆ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಮಾನ್ಯತೆ ಪಡೆದ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಕಡ್ಡಾಯವಾಗಿರುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA): ಪ್ರಥಮ ದರ್ಜೆ ಸಹಾಯಕರು (FDA) (ಪದವಿ) 1 ಹುದ್ದೆ ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) (ಪಿಯುಸಿ ಅಥವಾ ತತ್ಸಮಾನ) 6 ಹುದ್ದೆಗಳು.
ತಾಂತ್ರಿಕ ಶಿಕ್ಷಣ ಇಲಾಖೆ: ಪ್ರಥಮ ದರ್ಜೆ ಸಹಾಯಕರು (FDA) 16 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) 23 ಹುದ್ದೆಗಳು ಲಭ್ಯವಿವೆ.
ಇತರೆ ಹುದ್ದೆಗಳು: ಕೆಎಸ್‌ಡಿಎಲ್‌ನಲ್ಲಿ 14 ಹುದ್ದೆಗಳು (ಮಾರುಕಟ್ಟೆ ಕಿರಿಯ ಅಧಿಕಾರಿ-1, ಮಾರಾಟ ಪ್ರತಿನಿಧಿ-04, ಆಪರೇಟರ್-09) ಲಭ್ಯವಿದೆ. ಇನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯ (ಆರ್‌ಜಿಎಚ್‌ಎಸ್‌ಯು)ನಲ್ಲಿ 4 ಹುದ್ದೆಗಳು (ಜೂನಿಯರ್ ಪ್ರೋಗ್ರಾಮರ್-1, ಸಹಾಯಕ-1, ಕಿರಿಯ ಸಹಾಯಕ-2) ಲಭ್ಯವಿದೆ.
ಪ್ರಮುಖ ದಿನಾಂಕಗಳು ಮತ್ತು ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 9, 2025 ರಂದು ಪ್ರಾರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10, 2025 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಗೆ ನವೆಂಬರ್ 11, 2025 ಅಂತಿಮ ದಿನವಾಗಿದೆ.
ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500/- ಶುಲ್ಕ ನಿಗದಿಪಡಿಸಲಾಗಿದೆ. ವಿಶೇಷ ಚೇತನರಿಗೆ 250 ರೂ. ನಿಗದಿಪಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ, ಪ್ರತಿ ಹೆಚ್ಚುವರಿ ಹುದ್ದೆಗೆ ₹100/- ಅರ್ಜಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಬೇಕು.
ವಯೋಮಿತಿ ಮತ್ತು ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಗಳಿಗೆ 41 ವರ್ಷಗಳಾಗಿವೆ. ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳವರೆಗೆ ಇರುತ್ತದೆ.
ಆಯ್ಕೆಯು ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯುತ್ತದೆ. ಅರ್ಹತೆಗಾಗಿ ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 35 ರಷ್ಟು (ಕೆಕೆಆರ್‌ಟಿಸಿ ಹುದ್ದೆಗಳಿಗೆ ಶೇಕಡಾ 30) ಅಂಕಗಳನ್ನು ಗಳಿಸುವುದು ಕಡ್ಡಾಯ. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ (1/4) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್ (https://cetonline.karnataka.gov.in/VAOResult/DigilockerReg.aspx) ಗೆ ಭೇಟಿ ನೀಡಬಹುದಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ