ತಾಂತ್ರಿಕ ಪದವಿ ಕೋರ್ಸ್, ಕೋರ್ಸ್ ಅವಧಿ: 12 ತಿಂಗಳು, ಸ್ಥಳ: ಭಾರತೀಯ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್, ಕೋರ್ಸ್ ಪೂರ್ಣಗೊಳಿಸಿದ ಬಳಿಕ ಕಾರ್ಪ್ಸ್ ಆಫ್ ಎಂಜಿನಿಯರ್ಸ್, ಕಾರ್ಫ್ಸ್ ಆಫ್ ಸಿಗ್ನಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಹಿತ ವಿವಿಧ ಶಾಖೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಇ./ಬಿ.ಟೆಕ್ ಅಥವಾ ಎಂಎಸ್‌ಸಿ ಪದವಿ ಪಡೆದಿರಬೇಕು. ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್ ಹಾಗೂ ಸಂಬಂಧಿತ ಇತರ ಎಂಜಿನಿಯರಿಂಗ್ ವಿಭಾಗಗಳು ಒಳಗೊಂಡಿರುತ್ತವೆ.
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 27 ವರ್ಷ. , ತರಬೇತಿ ಆರಂಭ: 2026ರ ಜುಲೈ.,
ನೇಮಕಾತಿ ವಿಧಾನ: ಭಾರತೀಯ ಸೇನೆ ನಿಗದಿಪಡಿಸಿದ ಮಾನದಂಡಗಳಿಗನುಸಾರವಾಗಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವುದು ಕಡ್ಡಾಯ. ಬಿಇ/ಬಿ.ಟೆಕ್ ಅಥವಾ ಎಂಎಸ್ಸಿ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಅವರನ್ನು ಸರ್ವಿಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಆಯ್ಕೆಯಾದವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳಗಳು: ಬೆಂಗಳೂರು, ಪ್ರಯಾಗ್‌ರಾಜ್, ಭೋಪಾಲ್, ಜಲಂಧರ್
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 6-11-25,
ಅರ್ಜಿ ಸಲ್ಲಿಸಲು: https:// joinindianarmy.nic.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ