ಬುಧವಾರ, ಜನವರಿ 28, 2026

ಅನುಕಂಪದ ಉದ್ಯೋಗ

ವೇತನ ಎಷ್ಟು?

ವೇತನ ಶ್ರೇಣಿ 49,050 ರೂ. - 92,500 ವರೆಗೂ ನೀಡಲಾಗಿದೆ.
ಯಾವ ನಿಯಮದಡಿ ಬೀಳಗು ಪುತ್ರಿಗೆ ಹುದ್ದೆ?

ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರನ್ವಯ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆ ನೀಡಲಾಗಿದೆ.
ಅಪಘಾತ ಆಗಿದ್ದು ಹೇಗೆ?

ಕಲಬುರಗಿ ಬಳಿ ಜೇವರ್ಗಿ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 51 ವರ್ಷದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್‌ ಬೀಳಗಿ ಅವರು ಮೃತಪಟ್ಟಿದ್ದರು. ಕೆಎ 04, ಎನ್‌ 7982 ಸಂಖ್ಯೆಯ ಇನೋವಾ ಹೈಕ್ರಾಸ್‌ ಕಾರು ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ದಾರಿ ಮಧ್ಯೆ ಬಂದ ನಾಯಿಯೊಂದನ್ನು ತಪ್ಪಿಸಲು ಹೋಗಿ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಈ ದುರ್ಘಟನೆ ನಡೆದಿತ್ತು. ಬೀಳಗಿ ಅವರ ಸಹೋದರ ಶಂಕರ ಬೀಳಗಿ ಹಾಗೂ ಸೋದರ ಸಂಬಂಧಿ ಈರಣ್ಣ ಶಿರಸಂಗಿ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಬಳಿಕ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಂಬಂಧ ಸಾವಿಗೀಡಾಗಿದ್ದರು.
ಬಡತನಮೆಟ್ಟಿ ನಿಂತ ಅಧಿಕಾರಿ

ಮಹಾಂತೇಶ್‌ ಬೀಳಗಿ ಅವರು ಬಡತನವನ್ನು ಮೆಟ್ಟಿ ನಿಂತು ದೊಡ್ಡ ಅಧಿಕಾರಿಯಾಗಿದ್ದವರು. ಮೊದಲಿಗೆ ಕೆಎಎಸ್‌ ಅಧಿಕಾರಿಯಾಗಿ, ಆ ಬಳಿಕ ಐಎಎಸ್‌ ಹುದ್ದೆಗೆ ಆಯ್ಕೆಯಾಗಿದ್ದರು. ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದಾವಣಗೆರೆ ಜಿಲ್ಲಾಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ತಮ್ಮ ದಕ್ಷತೆಯಿಂದ ಎಲ್ಲೆಡೆ ಗುರುತಿಸಿಕೊಂಡಿದ್ದ ಅವರು, ಅನೇಕರಿಗೆ ಸ್ಫೂರ್ತಿಯಾಗಿದ್ದರು. ದಾವಣಗೆರೆಯಿಂದ ವರ್ಗಾವಣೆಯಾದ ಬಳಿಕ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ, ಕೊನೆಯದಾಗಿ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ಸಾವು ಕರ್ನಾಟಕ ಜನತೆಗೆ ತುಂಬಲಾರದ ನಷ್ಟ ಎಂದು ಗಣ್ಯರು ಸಂತಾಪ ಸೂಚಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : ಅಂಚೆ ಇಲಾಖೆಯಲ್ಲಿ 28,740 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ಒಟ್ಟು ಹುದ್ದೆಗಳು: 28,740 (ಅಂದಾಜು) ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್), ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂ...

BCMHOSTEL2077