ಶುಕ್ರವಾರ, ಜನವರಿ 30, 2026

kass

ಆದರೆ, ರಾಜ್ಯವ್ಯಾಪಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಬಹುತೇಕ ಸರ್ಕಾರಿ ನೌಕರರು ತೊಡಗಿದ್ದರಿಂದ ಅನೇಕರು ತಮ್ಮ ಅಭಿಪ್ರಾಯವನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ವಿವಿಧ ಸರ್ಕಾರಿ ನೌಕರರ ಸಂಘಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿದ ಸರ್ಕಾರ, ಕೊನೆಯ ಅವಕಾಶವಾಗಿ 2026ರ ಫೆಬ್ರವರಿ ತಿಂಗಳ ಅಂತ್ಯದವರೆಗೂ Opt-in ಅಥವಾ Opt-out ಕುರಿತು ಲಿಖಿತ ಅಭಿಮತ ಸಲ್ಲಿಸಲು ಅವಕಾಶ ನೀಡಲು ತೀರ್ಮಾನಿಸಿದೆ.

ಸರ್ಕಾರದ ಆದೇಶದ ಮುಖ್ಯ ಅಂಶಗಳು

  • ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವ (Opt-in) ಅಥವಾ ಹೊರಗುಳಿಯುವ (Opt-out) ಬಗ್ಗೆ ಲಿಖಿತ ಅಭಿಮತವನ್ನು ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ 2026ರ ಫೆಬ್ರವರಿ ಅಂತ್ಯದವರೆಗೂ ಸಲ್ಲಿಸಬಹುದು.

  • Opt-in ಆಯ್ಕೆ ಮಾಡಿಕೊಂಡ ನೌಕರರ ಮಾಸಿಕ ವಂತಿಕೆಯನ್ನು 2026ರ ಫೆಬ್ರವರಿ ತಿಂಗಳ ವೇತನದಿಂದ ಕಟಾವಣೆ ಮಾಡಲಾಗುತ್ತದೆ.

  • Opt-out ಅಭಿಮತವನ್ನು ಫೆಬ್ರವರಿ ಅಂತ್ಯದವರೆಗೆ ಸಲ್ಲಿಸದೇ ಇರುವ ನೌಕರರನ್ನು ಸ್ವಯಂವಾಗಿ (By default) ಯೋಜನೆಗೆ ಒಳಪಟ್ಟವರಾಗಿ ಪರಿಗಣಿಸಲಾಗುತ್ತದೆ.

  • ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರ ವಿವರಗಳನ್ನು HRMS ತಂತ್ರಾಂಶದಲ್ಲಿ ದಾಖಲಿಸುವಂತೆ ಡಿ.ಡಿ.ಓ.ಗಳಿಗೆ ಸೂಚಿಸಲಾಗಿದೆ.

ರಾಜ್ಯ ಸರ್ಕಾರವು ಈ ಯೋಜನೆಯ ಮೂಲಕ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಕ್ಕೆ ಉತ್ತಮ ಹಾಗೂ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಅಂತಿಮ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್ : ಅಂಚೆ ಇಲಾಖೆಯಲ್ಲಿ 28,740 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

ಒಟ್ಟು ಹುದ್ದೆಗಳು: 28,740 (ಅಂದಾಜು) ಹುದ್ದೆಗಳ ಹೆಸರು: ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್), ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂ...

BCMHOSTEL2077