ಮಂಗಳವಾರ, ಅಕ್ಟೋಬರ್ 14, 2025

world 🌎 students Day


ಅದೇ ರೀತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. APJ Abdul Kalam) ಅವರು ಸಹ  ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಪರಿವರ್ತಿಸುವ ಮಾಂತ್ರಿಕ ಶಕ್ತಿ ಎಂದು ನಂಬಿದ್ದವರು. ಜೊತೆಗೆ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದ ಅವರು ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ಹಾಗೂ ತಮ್ಮ ಸ್ಪೂರ್ತಿದಾಯಕ ಮಾತಿನ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಕಲಾಂ ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಈ ನಿಟ್ಟಿನಲ್ಲಿ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್‌ 15 ರಂದು ವಿಶ್ವ ವಿದ್ಯಾರ್ಥಿಗಳ (World Students’ Day) ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸವೇನು?

ಡಾ. ಕಲಾಂ ಒಬ್ಬ ವಿಜ್ಞಾನಿ ಮತ್ತು ಭಾರತದ ಮಿಸೈಲ್ ಮ್ಯಾನ್  ಮಾತ್ರವಲ್ಲದೆ, ಯುವಜನರು ದೊಡ್ಡ ಕನಸು ಕಾಣಲು ಮತ್ತು ಅವುಗ ಳನ್ನು ಸಾಧಿಸಲು ಯಾವಾಗಲೂ ಪ್ರೇರೇಪಿಸುವ ಶಿಕ್ಷಕರೂ ಆಗಿದ್ದರು. ಅವರ ಬೋಧನಾ ಪರಂಪರೆ ಮತ್ತು ಅವರು ಸ್ಥಾಪಿಸಿದ ಆದರ್ಶಗಳನ್ನು ಗೌರವಿಸಲು ವಿಶ್ವಸಂಸ್ಥೆಯು ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು. ಮೊದಲ ಬಾರಿಗೆ 2010 ರಲ್ಲಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 79ನೇ ಜನ್ಮದಿನದಂದು  ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ  ಮಹತ್ವದ ಕೊಡುಗೆಯನ್ನು ಗೌರವಿಸಲು ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ  ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವವೇನು?

  • ಈ ದಿನವು ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಮಗೆ ನೆನಪಿಸುತ್ತದೆ.
  • ಸರಿಯಾದ ಅವಕಾಶಗಳನ್ನು ನೀಡಿದರೆ, ವಿದ್ಯಾರ್ಥಿಗಳು ವಿಶ್ವವನ್ನು ಬದಲಾಯಿಸುವವರಾಗಬಹುದು. ಆದ್ದರಿಂದ, ಈ ದಿನವು ಶಿಕ್ಷಣವು ಪ್ರತಿಯೊಬ್ಬರ ಹಕ್ಕು ಮತ್ತು ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಬೇಕು ಎಂಬುದನ್ನು ನೆನಪಿಸುತ್ತದೆ.
  • ಸಮಾನ ಶೈಕ್ಷಣಿಕ ಅವಕಾಶಗಳನ್ನು ಉತ್ತೇಜಿಸುವುದು, ನಾವೀನ್ಯತೆಯ ಮನೋಭಾವವನ್ನು ಪ್ರೋತ್ಸಾಹಿಸುವುದು ಮತ್ತು ವಿದ್ಯಾರ್ಥಿಗಳ ಕೊಡುಗೆಗಳನ್ನು ಗುರುತಿಸುವುದು ವಿಶ್ವ ವಿದ್ಯಾರ್ಥಿ ದಿನದ ಉದ್ದೇಶವಾಗಿದೆ.
  • ಅಲ್ಲದೆ ಶಿಕ್ಷಣವು ವ್ಯಕ್ತಿಗಳನ್ನು ಮಾತ್ರವಲ್ಲದೆ ಇಡೀ ಸಮಾಜಗಳನ್ನು ಪರಿವರ್ತಿಸುತ್ತದೆ ಎಂಬ ಡಾ. ಕಲಾಂ ಅವರ ನಂಬಿಕೆಯನ್ನು ಈ ದಿನ ಸ್ಮರಿಸುತ್ತದೆ.
  • ಈ ದಿನದಂದು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಹತ್ವದ ಪಾತ್ರ, ಸಾಧನೆಗಳು ಮತ್ತು ವಿದ್ಯಾರ್ಥಿಗಳಿಗೆ ಅವರು ನೀಡಿದ ಸ್ಫೂರ್ತಿಯನ್ನು ಈ ದಿನದಂದು ಸ್ಮರಿಸಲಾಗುತ್ತದೆ.
  • ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಈ ದಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ. ಅಲ್ಲದೆ ಮಕ್ಕಳಿಗೆ ಡಾ. ಕಲಾಂ ಅವರ ಜೀವನ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ನೌಕರಿ ಪರ್ವ: ಕಂಡಕ್ಟರ್, FDA/SDA ಸೇರಿ 320ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ

ಈ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ಕಲ್ಯಾಣ ಕರ್ನಾಟಕ (HK) ವೃಂದದಡಿ ನೇರ ನೇಮಕಾತಿ ಮೂಲಕ ಮಾಡಲಾಗುತ್ತಿದೆ.

ಐದು ಸಂಸ್ಥೆಗಳಲ್ಲಿ ನೇಮಕಾತಿ:

ಒಟ್ಟು ಐದು ಸರ್ಕಾರಿ ಸಂಸ್ಥೆಗಳು/ನಿಗಮ/ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅವುಗಳೆಂದರೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಕರ್ನಾಟಕ ಸೋಪ್ಸ್‌ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL), ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ.

ಹುದ್ದೆಗಳ ವಿವರ ಮತ್ತು ಅರ್ಹತೆಗಳು:

ಕೆಕೆಆರ್‌ಟಿಸಿ (KKRTC) 253 ಹುದ್ದೆಗಳು: ಇದರಲ್ಲಿ 240 ನಿರ್ವಾಹಕ (Conductor) ಹುದ್ದೆಗಳು ಮತ್ತು 13 ಸಹಾಯಕ ಲೆಕ್ಕಿಗ ಹುದ್ದೆಗಳು ಸೇರಿವೆ. ನಿರ್ವಾಹಕ ಹುದ್ದೆಗೆ ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಮಾನ್ಯತೆ ಪಡೆದ ಮೋಟಾರು ವಾಹನ ಕಂಡಕ್ಟರ್ ಪರವಾನಗಿ ಮತ್ತು ಬ್ಯಾಡ್ಜ್ ಕಡ್ಡಾಯವಾಗಿರುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA): ಪ್ರಥಮ ದರ್ಜೆ ಸಹಾಯಕರು (FDA) (ಪದವಿ) 1 ಹುದ್ದೆ ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) (ಪಿಯುಸಿ ಅಥವಾ ತತ್ಸಮಾನ) 6 ಹುದ್ದೆಗಳು.

ತಾಂತ್ರಿಕ ಶಿಕ್ಷಣ ಇಲಾಖೆ: ಪ್ರಥಮ ದರ್ಜೆ ಸಹಾಯಕರು (FDA) 16 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರು (SDA) 23 ಹುದ್ದೆಗಳು ಲಭ್ಯವಿವೆ.

ಇತರೆ ಹುದ್ದೆಗಳು: ಕೆಎಸ್‌ಡಿಎಲ್‌ನಲ್ಲಿ 14 ಹುದ್ದೆಗಳು (ಮಾರುಕಟ್ಟೆ ಕಿರಿಯ ಅಧಿಕಾರಿ-1, ಮಾರಾಟ ಪ್ರತಿನಿಧಿ-04, ಆಪರೇಟರ್-09) ಲಭ್ಯವಿದೆ. ಇನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿದ್ಯಾಲಯ (ಆರ್‌ಜಿಎಚ್‌ಎಸ್‌ಯು)ನಲ್ಲಿ 4 ಹುದ್ದೆಗಳು (ಜೂನಿಯರ್ ಪ್ರೋಗ್ರಾಮರ್-1, ಸಹಾಯಕ-1, ಕಿರಿಯ ಸಹಾಯಕ-2) ಲಭ್ಯವಿದೆ.

ಪ್ರಮುಖ ದಿನಾಂಕಗಳು ಮತ್ತು ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 9, 2025 ರಂದು ಪ್ರಾರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 10, 2025 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿಗೆ ನವೆಂಬರ್ 11, 2025 ಅಂತಿಮ ದಿನವಾಗಿದೆ.

ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹750/- ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500/- ಶುಲ್ಕ ನಿಗದಿಪಡಿಸಲಾಗಿದೆ. ವಿಶೇಷ ಚೇತನರಿಗೆ 250 ರೂ. ನಿಗದಿಪಡಿಸಲಾಗಿದೆ. ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ, ಪ್ರತಿ ಹೆಚ್ಚುವರಿ ಹುದ್ದೆಗೆ ₹100/- ಅರ್ಜಿ ಶುಲ್ಕ ಹೆಚ್ಚುವರಿಯಾಗಿ ಪಾವತಿಸಬೇಕು.

ವಯೋಮಿತಿ ಮತ್ತು ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 38 ವರ್ಷಗಳು, ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗಗಳಿಗೆ 41 ವರ್ಷಗಳಾಗಿವೆ. ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷಗಳವರೆಗೆ ಇರುತ್ತದೆ.

ಆಯ್ಕೆಯು ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯುತ್ತದೆ. ಅರ್ಹತೆಗಾಗಿ ಅಭ್ಯರ್ಥಿಗಳು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 35 ರಷ್ಟು (ಕೆಕೆಆರ್‌ಟಿಸಿ ಹುದ್ದೆಗಳಿಗೆ ಶೇಕಡಾ 30) ಅಂಕಗಳನ್ನು ಗಳಿಸುವುದು ಕಡ್ಡಾಯ. ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶ (1/4) ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಕೆಇಎಯ ಅಧಿಕೃತ ವೆಬ್‌ಸೈಟ್ (https://cetonline.karnataka.gov.in/VAOResult/DigilockerReg.aspx) ಗೆ ಭೇಟಿ ನೀಡಬಹುದಾಗಿದೆ.

ದ್ವಿತೀಯ PUC' ಪರೀಕ್ಷೆ-1ಕ್ಕೆ ಹೊಸ ವಿದ್ಯಾರ್ಥಿಗಳ ನೋಂದಣಿ : ಪರೀಕ್ಷಾ ಮಂಡಳಿ ಮಹತ್ವದ ಆದೇಶ

1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 08-10-2025 ರಿಂದ 31-10-2025 ರವರೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.

2) ಮಾಹಿತಿಗಳನ್ನು ಮಂಡಲಿಯ ಜಾಲತಾಣದ https://kseeb.karnataka.gov.in ರಲ್ಲಿನ PU EXAM PORTAL ಕಾಲೇಜು ಲಾಗಿನ್ ಮುಖಾಂತರ ಅಪ್ಲೋಡ್ ಮಾಡುವುದು.

3) ಪ್ರಾಂಶುಪಾಲರು ಮಂಡಲಿಯ ಕಾಲೇಜು ಲಾಗಿನ್ ನಲ್ಲಿ ಈಗಾಗಲೇ ಸೃಜಿಸಲಾಗಿರುವ Username and Password ಬಳಸಿ ONLINE ನೋಂದಣಿ ಕಾರ್ಯ ಮಾಡಬಹುದಾಗಿದೆ.

4) ನೋಂದಣಿ ಕಾರ್ಯವನ್ನು ವಿದ್ಯಾರ್ಥಿಗಳ SATS NUMBER ಬಳಸಿ ಮಾಡುವುದು.

5) ಪ್ರತಿ ವಿದ್ಯಾರ್ಥಿಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) Jpeg, format ನಲ್ಲಿ ಅವರ SATS ನೋಂದಣಿ ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.

ಉದಾ:- ಅಭ್ಯರ್ಥಿಯ SATS ಸಂಖ್ಯೆಯು 12345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P12345678 ಎಂದು soft copy ಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು.

6) ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿಗಳ ಬಹುತೇಕ ಮಾಹಿತಿಗಳನ್ನು SATS ಡೇಟಾಬೇಸ್ ನಿಂದ ಪಡೆಯಲಾಗುವುದರಿಂದ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಪ್ರವರ್ಗ, ಲಿಂಗ ಮತ್ತು ಮಾಧ್ಯಮ, ಸಂಯೋಜನೆ ಹಾಗೂ ವಿಷಯ ಇವುಗಳಲ್ಲಿ ಯಾವುದೇ ತಿದ್ದುಪಡಿಗಳು ಇದ್ದಲ್ಲಿ, ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಮೊದಲು SATS ಡೇಟಾಬೇಸ್ನಲ್ಲಿ ಶಾಲಾ ಶಿಕ್ಷಣ (ಪಿ.ಯು. ಇಲಾಖೆ) 18ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-12 ಇಲ್ಲಿ ತಿದ್ದುಪಡಿ ಮಾಡಿಸಿದ ನಂತರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ PU EXAM PORTAL ಕಾಲೇಜು ಲಾಗಿನ್ನಲ್ಲಿ UPDATE LATEST DATA FROM SATS ಮಾಡಿದ ನಂತರ ಪರಿಷ್ಕೃತ ಮಾಹಿತಿಯನ್ನು ಪರಿಶೀಲಿಸಿ ತಾಳೆ ಹೊಂದಿದ ನಂತರ SUBMIT ಮಾಡುವುದು.

7) SATS ನಲ್ಲಿ ತಿದ್ದುಪಡಿ ಮಾಡಿಸುವಾಗ ಎಸ್.ಎಸ್.ಎಲ್.ಸಿ./10ನೇ ತರಗತಿ ಅಂಕಪಟ್ಟಿಯ ವಿವರಗಳ ಜೊತೆ ಪರಿಶೀಲಿಸುವುದು.




ಶನಿವಾರ, ಅಕ್ಟೋಬರ್ 11, 2025

www.ksoumysuru.ac.in

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯೂ, ಬಿ.ಲಿಬ್ ಐಎಸ್ಸಿ, ಎಂಎ, ಎಂ,ಕಾಂ, ಎಂಬಿಎ, ಎಂಸಿಎ, ಎಂಎಸ್ಸಿ, ಎಂಎಸ್‌ಡಬ್ಲ್ಯೂ, ಎಂ.ಲಿಬ್ ಐಎಸ್‌ಸಿ, ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.

ಅಭ್ಯರ್ಥಿಗಳು ವಿವಿಯ ವೆಬ್‌ಸೈಟ್ www.ksoumysuru.ac.in ನಲ್ಲಿ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ವಿವಿಯ ರಾಮನಗರ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಿಶೇಷ ರಿಯಾಯಿತಿ: ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ, ರಕ್ಷಣಾ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ, ಆಟೊ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮತ್ತು ಕೆಎಸ್‌ಆರ್‌ಟಿಸಿ/ಬಿಎಂಟಿಸಿ ನೌಕರರಿಳಿಗೆ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ ಸಿಗಲಿದೆ (ಯುಜಿ ಮತ್ತು ಪಿ,ಜಿ ಪದವಿ ಪ್ರೋಗ್ರಾಂ ಮಾತ್ರ).

ಕೋವಿಡ್‌ನಿಮದ ಮೃತರಾದ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರವೇಶ ಬಯಸುವ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಶೇ 50ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಇಡಿ ಮತ್ತು ಎಂಬಿಎ ಕಾರ್ಯಕ್ರಮಗಳಿಗೆ ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ತೃತೀಯ ಲಿಂಗ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಸಿಗಲಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ ಎಸ್‌ಎಸ್‌ಪಿ ಮುಖಾಂತರ ವಿದ್ಯಾರ್ಥಿವೇತನ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ, ನಂ. 103, 'ಇ' ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ಮೊಬೈಲ್ ಸಂಖ್ಯೆ:-9448668880, 8861732487, 8618501602, 9743184848 ಹಾಗೂ 9900356226 ಸಂಪರ್ಕಿಸಬೇಕು ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ ಎಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ `1650' ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್


ಸದರಿ ಪತ್ರದಲ್ಲಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ (275 ಕಲ್ಯಾಣ ಕರ್ನಾಟಕ ಮತ್ತು 1375 ಕಲ್ಯಾಣ ಕರ್ನಾಟಕೇತರ ಹುದ್ದೆಗಳು) ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು ಹಾಗೂ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ ಆ ರಲ್ಲಿ ಒದಗಿಸಲಾಗಿತ್ತು.

ಸದರಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮರು ಹಂಚಿಕೆಮಾಡಲಾಗಿದ್ದು, ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರವನ್ನು ಅನುಬಂಧ-ಅರಲ್ಲಿ ಲಗತ್ತಿಸಿದೆ. ಹಾಗೂ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳವಂತೆ ಕೋರಲಾಗಿದೆ.

ರಾಜ್ಯದಲ್ಲಿ `1650' ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್


ಸದರಿ ಪತ್ರದಲ್ಲಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ (275 ಕಲ್ಯಾಣ ಕರ್ನಾಟಕ ಮತ್ತು 1375 ಕಲ್ಯಾಣ ಕರ್ನಾಟಕೇತರ ಹುದ್ದೆಗಳು) ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು ಹಾಗೂ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಅನುಬಂಧ ಆ ರಲ್ಲಿ ಒದಗಿಸಲಾಗಿತ್ತು.

ಸದರಿ 1650 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಆಡಳಿತಾತ್ಮಕ ಕಾರಣಗಳಿಂದ ಮರು ಹಂಚಿಕೆಮಾಡಲಾಗಿದ್ದು, ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರವನ್ನು ಅನುಬಂಧ-ಅರಲ್ಲಿ ಲಗತ್ತಿಸಿದೆ. ಹಾಗೂ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳವಂತೆ ಕೋರಲಾಗಿದೆ.

www.ksoumysuru.ac.in

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಬಿಎ, ಬಿ.ಕಾಂ, ಬಿಎಸ್ಸಿ, ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯೂ, ಬಿ.ಲಿಬ್ ಐಎಸ್ಸಿ, ಎಂಎ, ಎಂ,ಕಾಂ, ಎಂಬಿಎ, ಎಂಸಿಎ, ಎಂಎಸ್ಸಿ, ಎಂಎಸ್‌ಡಬ್ಲ್ಯೂ, ಎಂ.ಲಿಬ್ ಐಎಸ್‌ಸಿ, ಪಿ.ಜಿ. ಸರ್ಟಿಫಿಕೇಟ್ ಪ್ರೊಗ್ರಾಮ್, ಡಿಪ್ಲೊಮಾ ಪ್ರೊಗ್ರಾಮ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ.

ಅಭ್ಯರ್ಥಿಗಳು ವಿವಿಯ ವೆಬ್‌ಸೈಟ್ www.ksoumysuru.ac.in ನಲ್ಲಿ ಆನ್‌ಲೈನ್ ಅಡ್ಮಿಷನ್ ಪೋರ್ಟಲ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ವಿವಿಯ ರಾಮನಗರ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಶುಲ್ಕದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಿಶೇಷ ರಿಯಾಯಿತಿ: ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೆ, ರಕ್ಷಣಾ ಹಾಗೂ ಮಾಜಿ ಸೈನಿಕರ ಮಕ್ಕಳಿಗೆ, ಆಟೊ ಮತ್ತು ಕ್ಯಾಬ್ ಚಾಲಕರು ಮತ್ತು ಅವರ ಪತಿ/ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಮತ್ತು ಕೆಎಸ್‌ಆರ್‌ಟಿಸಿ/ಬಿಎಂಟಿಸಿ ನೌಕರರಿಳಿಗೆ ಬೋಧನಾ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ ಸಿಗಲಿದೆ (ಯುಜಿ ಮತ್ತು ಪಿ,ಜಿ ಪದವಿ ಪ್ರೋಗ್ರಾಂ ಮಾತ್ರ).

ಕೋವಿಡ್‌ನಿಮದ ಮೃತರಾದ ತಂದೆ/ತಾಯಿಯ ಮಕ್ಕಳಿಗೆ ಅವರು ಅರ್ಹತೆ ಹೊಂದಿ ಪ್ರವೇಶ ಬಯಸುವ ಶಿಕ್ಷಣ ಕ್ರಮಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಶೇ 50ಕ್ಕೂ ಹೆಚ್ಚಿನ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ (ಬಿ.ಇಡಿ ಮತ್ತು ಎಂಬಿಎ ಕಾರ್ಯಕ್ರಮಗಳಿಗೆ ಹೊರತುಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ತೃತೀಯ ಲಿಂಗ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಸಿಗಲಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿ ಸರ್ಕಾರದ ಎಸ್‌ಎಸ್‌ಪಿ ಮುಖಾಂತರ ವಿದ್ಯಾರ್ಥಿವೇತನ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ರಾಮನಗರ ಪ್ರಾದೇಶಿಕ ಕೇಂದ್ರ, ನಂ. 103, 'ಇ' ಬ್ಲಾಕ್, ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆ, ಬಿ.ಎಂ.ರಸ್ತೆ, ವಿವೇಕಾನಂದನಗರ, ರಾಮನಗರ-562159. ಮೊಬೈಲ್ ಸಂಖ್ಯೆ:-9448668880, 8861732487, 8618501602, 9743184848 ಹಾಗೂ 9900356226 ಸಂಪರ್ಕಿಸಬೇಕು ಎಂದು ವಿವಿಯ ಪ್ರಾದೇಶಿಕ ನಿರ್ದೇಶಕ ಗಿರೀಶ ಎಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳವಾರ, ಸೆಪ್ಟೆಂಬರ್ 30, 2025

computer information


​1. ಕಂಪ್ಯೂಟರ್ ಎಂದರೇನು? (What is a Computer?)

​ಕಂಪ್ಯೂಟರ್ ಎಂದರೆ ಒಂದು ಎಲೆಕ್ಟ್ರಾನಿಕ್ ಸಾಧನ (Electronic Device). ಇದು ಬಳಕೆದಾರರಿಂದ ಮಾಹಿತಿಯನ್ನು ಇನ್‌ಪುಟ್‌ (Input) ಆಗಿ ತೆಗೆದುಕೊಂಡು, ಅದನ್ನು ಸಂಸ್ಕರಿಸಿ (Process), ಮತ್ತು ನಮಗೆ ಔಟ್‌ಪುಟ್‌ (Output) ಆಗಿ ಫಲಿತಾಂಶವನ್ನು ನೀಡುತ್ತದೆ.

​2. ಕಂಪ್ಯೂಟರ್‌ನ ಮುಖ್ಯ ಭಾಗಗಳು (Main Parts of a Computer)

​ಕಂಪ್ಯೂಟರ್‌ನಲ್ಲಿ ಪ್ರಮುಖವಾಗಿ ಎರಡು ಭಾಗಗಳಿವೆ:

​A. ಹಾರ್ಡ್‌ವೇರ್ (Hardware)

​ಕಂಪ್ಯೂಟರ್‌ನ ಸ್ಪರ್ಶಿಸಬಹುದಾದ (physical) ಎಲ್ಲಾ ಭೌತಿಕ ಭಾಗಗಳನ್ನು ಹಾರ್ಡ್‌ವೇರ್ ಎನ್ನುತ್ತಾರೆ.

  • ಸಿಪಿಯು (CPU - Central Processing Unit): ಇದನ್ನು ಕಂಪ್ಯೂಟರ್‌ನ ಮೆದುಳು (Brain) ಎಂದು ಕರೆಯುತ್ತಾರೆ. ಎಲ್ಲಾ ಲೆಕ್ಕಾಚಾರ ಮತ್ತು ಸಂಸ್ಕರಣೆ ಇಲ್ಲೇ ನಡೆಯುತ್ತದೆ.
  • ಮಾನಿಟರ್ (Monitor): ಫಲಿತಾಂಶವನ್ನು (ಔಟ್‌ಪುಟ್) ಪರದೆಯ ಮೇಲೆ ತೋರಿಸುತ್ತದೆ.
  • ಕೀಬೋರ್ಡ್ (Keyboard): ಅಕ್ಷರಗಳು ಮತ್ತು ಸಂಖ್ಯೆಗಳನ್ನು ಟೈಪ್ ಮಾಡಲು ಬಳಸುವ ಇನ್‌ಪುಟ್ ಸಾಧನ.
  • ಮೌಸ್ (Mouse): ಪರದೆಯ ಮೇಲೆ ವಸ್ತುಗಳನ್ನು (objects) ಆಯ್ಕೆ ಮಾಡಲು ಮತ್ತು ಚಲಾಯಿಸಲು ಬಳಸುವ ಇನ್‌ಪುಟ್ ಸಾಧನ.
  • ಸ್ಟೋರೇಜ್ (Storage - ಉದಾ: ಹಾರ್ಡ್ ಡ್ರೈವ್): ದತ್ತಾಂಶ (Data) ಮತ್ತು ಪ್ರೋಗ್ರಾಂಗಳನ್ನು ಶಾಶ್ವತವಾಗಿ ಸಂಗ್ರಹಿಸುತ್ತದೆ.

​B. ಸಾಫ್ಟ್‌ವೇರ್ (Software)

​ಕಂಪ್ಯೂಟರ್‌ಗೆ ಏನು ಮಾಡಬೇಕೆಂದು ಹೇಳುವ ಕಾರ್ಯಕ್ರಮಗಳು (Programs) ಮತ್ತು ಸೂಚನೆಗಳ (Instructions) ಗುಂಪು ಇದಾಗಿದೆ. ಇದನ್ನು ಮುಟ್ಟಲು ಸಾಧ್ಯವಿಲ್ಲ.

  • ಆಪರೇಟಿಂಗ್ ಸಿಸ್ಟಮ್ (OS - Operating System): ಇದು ಕಂಪ್ಯೂಟರ್ ಅನ್ನು ನಡೆಸುವ ಮುಖ್ಯ ಸಾಫ್ಟ್‌ವೇರ್. ಉದಾಹರಣೆಗೆ: ವಿಂಡೋಸ್ (Windows), ಮ್ಯಾಕ್ಓಎಸ್ (macOS).
  • ಅಪ್ಲಿಕೇಶನ್ ಸಾಫ್ಟ್‌ವೇರ್ (Application Software): ನಿರ್ದಿಷ್ಟ ಕಾರ್ಯಗಳಿಗಾಗಿ ಬಳಸುವ ಪ್ರೋಗ್ರಾಂಗಳು. ಉದಾಹರಣೆಗೆ: ಎಂ.ಎಸ್. ವರ್ಡ್ (MS Word), ಬ್ರೌಸರ್‌ಗಳು (Chrome/Firefox).

​3. ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ? (How does a Computer Work? - The IPO Cycle)

​ಕಂಪ್ಯೂಟರ್ ಈ ಮೂರು ಹಂತಗಳಲ್ಲಿ ಕೆಲಸ ಮಾಡುತ್ತದೆ:

  1. ಇನ್‌ಪುಟ್ (Input): ಕೀಬೋರ್ಡ್ ಅಥವಾ ಮೌಸ್‌ನಿಂದ ದತ್ತಾಂಶವನ್ನು (Data) ಕಂಪ್ಯೂಟರ್‌ಗೆ ನೀಡುವುದು.
  2. ಪ್ರೊಸೆಸಿಂಗ್ (Processing): ಸಿಪಿಯು, ನೀಡಿದ ದತ್ತಾಂಶವನ್ನು ಸಂಸ್ಕರಿಸುವುದು ಅಥವಾ ಲೆಕ್ಕಾಚಾರ ಮಾಡುವುದು.
  3. ಔಟ್‌ಪುಟ್ (Output): ಸಂಸ್ಕರಿಸಿದ ಫಲಿತಾಂಶವನ್ನು ಮಾನಿಟರ್ ಅಥವಾ ಪ್ರಿಂಟರ್ ಮೂಲಕ ಬಳಕೆದಾರರಿಗೆ ಪ್ರದರ್ಶಿಸುವುದು.

​ಈ ಮಾಹಿತಿಯು ನಿಮಗೆ ಸಹಾಯಕವಾಗಿದೆಯೇ? ಕಂಪ್ಯೂಟರ್‌ನ ಯಾವ ಭಾಗದ ಬಗ್ಗೆ ನೀವು ಹೆಚ್ಚು ತಿಳಿದುಕೊಳ್ಳಲು ಬಯಸುತ್ತೀರಿ?

ಪ್ರಸ್ತುತ ರಾಜ್ಯದಲ್ಲಿ ಒಟ್ಟು 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು 3.2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು 3.2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಹೆಚ್ಚುವರಿ ಬೋಧನಾ ಕಾರ್ಯಭಾರವನ್ನು ನಿರ್ವಹಿಸಲು ಸರ್ಕಾರಿ ಕಾಲೇಜಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಅತಿಥಿ ಉಪನ್ಯಾಸಕರಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳಿಂದಾಗಿ 2025-26ನೇ ಸಾಲಿನ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯುವ ಪ್ರಕ್ರಿಯೆಯು ವಿಳಂಬಗೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಶ್ವವಿದ್ಯಾನಿಲಯಗಳು ಈಗಾಗಲೇ ಘೋಷಿಸಿರುವ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಭಾಗಶಃ ಬದಲಾಯಿಸುವ ಮೂಲಕ ಬೋಧನಾ ದಿನಗಳ ನಷ್ಟದಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನಾನುಕೂಲವನ್ನು ಸರಿದೂಗಿಸುವ ಅವಶ್ಯವಿರುತ್ತದೆ.


ಈ ಹಿನ್ನೆಲೆಯಲ್ಲಿ, ಮೇಲೆ ಓದಲಾದ (2) ರ ಕಡತದಲ್ಲಿ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಇವರು ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ (revised) ಸೆಮಿಸ್ಟರ್ ತರಗತಿಗಳ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ಆ ದಿನಾಂಕವನ್ನು ಅಳವಡಿಸಿಕೊಂಡು ಅದರಂತೆ ಪರೀಕ್ಷಾ ದಿನಾಂಕಗಳನ್ನು ನಿಗದಿಗೊಳಿಸುವಂತೆ ಸರ್ಕಾರವನ್ನು ಕೋರಿರುತ್ತಾರೆ.


ಮೇಲ್ಕಂಡ ಅಂಶಗಳನ್ವಯ 2025-26ನೇ ಸಾಲಿನ ಶೈಕ್ಷಣಿಕ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ವಿಶ್ವವಿದ್ಯಾಲಯಗಳು /ಕಾಲೇಜು ಶಿಕ್ಷಣ/ಅನುದಾನ/ ಅನುದಾನ ರಹಿತ ಕಾಲೇಜುಗಳಲ್ಲಿ (ತಾಂತ್ರಿಕ ಶಿಕ್ಷಣವನ್ನು ಹೊರತುಪಡಿಸಿ) ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಶೈಕ್ಷಣಿಕ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಜಾರಿಗೊಳಿಸಲು ಸರ್ಕಾರವು ತೀರ್ಮಾನಿಸಿದ್ದು, ಅದರಂತೆ ಈ ಕೆಳಕಂಡ ಆದೇಶ.


ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2025-26ನೇ ಸಾಲಿನ ಶೈಕ್ಷಣಿಕ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ವಿಶ್ವವಿದ್ಯಾಲಯಗಳು /ಕಾಲೇಜು ಶಿಕ್ಷಣ/ಅನುದಾನ/ ಅನುದಾನ ರಹಿತ ಕಾಲೇಜುಗಳಲ್ಲಿ (ತಾಂತ್ರಿಕ ಶಿಕ್ಷಣವನ್ನು ಹೊರತುಪಡಿಸಿ) ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ಕೆಳಗಿನ ಕೋಷ್ಟಕದಲ್ಲಿರುವಂತೆ ಪರಿಷ್ಕೃತ (revised) ಸೆಮಿಸ್ಟರ್ ತರಗತಿಗಳ ಕೊನೆಯ ದಿನಾಂಕವನ್ನು ಅಳವಡಿಸಿಕೊಂಡು, ಅದರಂತೆ ಪರೀಕ್ಷಾ ದಿನಾಂಕಗಳನ್ನು ನಿಗದಿಗೊಳಿಸಿ ಶೈಕ್ಷಣಿಕ ವರ್ಷದ ಮಧ್ಯಂತರ ರಜಾ ಅವಧಿಯನ್ನು ಕಡಿತಗೊಳಿಸಿ ಸಮ ಸಂಖ್ಯೆಯ ಸೆಮಿಸ್ಟರ್ ( Even Semisters) ಪ್ರಾರಂಭದ ದಿನಾಂಕಗಳನ್ನು ಬದಲಾವಣೆ ಮಾಡಿಕೊಂಡು ಈ ಕೆಳಕಂಡಂತೆ ಕಡ್ಡಾಯವಾಗಿ ಜಾರಿಗೊಳಿಸಲು ಆದೇಶಿಸಿದ್ದಾರೆ.



sbi card💳

ಯಾವುದೇ ಅನಿರೀಕ್ಷಿತ ದಂಡಗಳನ್ನು ತಪ್ಪಿಸಲು ಮತ್ತು ಉತ್ತಮ ಕ್ರೆಡಿಟ್ ಇತಿಹಾಸವನ್ನು ಕಾಪಾಡಿಕೊಳ್ಳಲು, ಕಾರ್ಡ್‌ದಾರರು ಈ ಹೊಸ ಶುಲ್ಕ ರಚನೆಯ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.

ಥರ್ಡ್ ಪಾರ್ಟಿ ಆಯಪ್‌ಗಳ ಮೂಲಕ ಶಿಕ್ಷಣ ಪಾವತಿಗಳ ಶುಲ್ಕ

CRED, Cheq, ಮತ್ತು MobiKwik ನಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಮಾಡುವ ಶಿಕ್ಷಣ ಪಾವತಿಗಳ ಮೇಲೆ ಎಸ್‌ಬಿಐ ಕಾರ್ಡ್ ಈಗ ವಹಿವಾಟು ಮೊತ್ತದ 1% ರಷ್ಟನ್ನು ಶುಲ್ಕವಾಗಿ ವಿಧಿಸಲು ನಿರ್ಧರಿಸಿದೆ. ಆದಾಗ್ಯೂ, ಶಾಲೆಗಳು, ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಿಗೆ ನೇರವಾಗಿ SBI ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ಗಳು ಅಥವಾ ಆನ್-ಸೈಟ್ POS ಯಂತ್ರಗಳ ಮೂಲಕ ಮಾಡುವ ಪಾವತಿಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ. ಈ ಹೊಸ ಶುಲ್ಕವು MCC ಕೋಡ್‌ಗಳು 8211, 8220, 8241, 8244, 8249, 8299 ಅಡಿಯಲ್ಲಿ ಗುರುತಿಸಲಾದ ಮೂರನೇ ವ್ಯಕ್ತಿಯ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ.

₹1,000 ಕ್ಕಿಂತ ಹೆಚ್ಚಿನ ವ್ಯಾಲೆಟ್ ಲೋಡ್ ವಹಿವಾಟುಗಳ ಶುಲ್ಕ

₹1,000 ಕ್ಕಿಂತ ಹೆಚ್ಚಿನ ಮೊತ್ತದ ಪ್ರತಿ ವ್ಯಾಲೆಟ್ ಲೋಡ್ ವಹಿವಾಟಿಗೆ ಸಹ ಎಸ್‌ಬಿಐ ಕಾರ್ಡ್ ವಹಿವಾಟು ಮೊತ್ತದ 1% ಅನ್ನು ಶುಲ್ಕವಾಗಿ ವಿಧಿಸುತ್ತದೆ. ಈ ಶುಲ್ಕವು MCC ಕೋಡ್‌ಗಳು 6540 ಮತ್ತು 6541 ಅಡಿಯಲ್ಲಿ ಗುರುತಿಸಲಾದ ವಹಿವಾಟುಗಳಿಗೆ ಅನ್ವಯಿಸುತ್ತದೆ. ನೆಟ್‌ವರ್ಕ್ ಪಾಲುದಾರರು ಈ MCC ಗಳನ್ನು ವ್ಯಾಖ್ಯಾನಿಸುತ್ತಾರೆ ಮತ್ತು ಅವರ ವಿವೇಚನೆಯ ಮೇರೆಗೆ ಇವು ಬದಲಾಗಬಹುದು ಎಂದು SBI ಕಾರ್ಡ್ ಸ್ಪಷ್ಟಪಡಿಸಿದೆ.

ಇತರ ಪ್ರಮುಖ SBI ಕಾರ್ಡ್ ಶುಲ್ಕಗಳು
(ಪರಿಷ್ಕರಿಸದ ದರಗಳು)

ಶಿಕ್ಷಣ ಪಾವತಿ ಮತ್ತು ವ್ಯಾಲೆಟ್ ಲೋಡ್ ಶುಲ್ಕಗಳ ಹೊರತಾಗಿ, ಈ ಕೆಳಗಿನ ಇತರೆ ಸೇವೆಗಳ ಶುಲ್ಕಗಳು ಮತ್ತು ದಂಡಗಳು ಪರಿಷ್ಕರಿಸಲಾಗಿಲ್ಲ ಮತ್ತು ಹಿಂದಿನಂತೆಯೇ ಮುಂದುವರೆಯುತ್ತವೆ.

ನಗದು ಮುಂಗಡ, ಪಾವತಿ ಮತ್ತು ಕಾರ್ಡ್ ಬದಲಿ ಶುಲ್ಕಗಳು

ಕೌಂಟರ್‌ನಲ್ಲಿ ಮಾಡುವ ನಗದು ಪಾವತಿಗಳಿಗೆ ₹250 ಶುಲ್ಕವಿದೆ, ಮತ್ತು ಚೆಕ್ ಪಾವತಿ ಶುಲ್ಕ ₹200 ಆಗಿದೆ. ಒಂದು ವೇಳೆ ನಿಮ್ಮ ಪಾವತಿಯು ಗೌರವಿಸಲ್ಪಡದಿದ್ದರೆ (ಚೆಕ್ ಬೌನ್ಸ್), ಪಾವತಿ ಗೌರವ ನಷ್ಟ ಶುಲ್ಕವು ಪಾವತಿ ಮೊತ್ತದ 2% ರಷ್ಟಿದ್ದು (ಕನಿಷ್ಠ ₹500). ದೇಶೀಯ ಮತ್ತು ಅಂತರರಾಷ್ಟ್ರೀಯ ATM ಗಳಲ್ಲಿ ನಗದು ಮುಂಗಡ ಶುಲ್ಕವು ವಹಿವಾಟು ಮೊತ್ತದ 2.5% ರಷ್ಟಿದ್ದು (ಕನಿಷ್ಠ ₹500) ನಿಗದಿಪಡಿಸಲಾಗಿದೆ. ಕಾರ್ಡ್ ಬದಲಿ ಶುಲ್ಕ ಸಾಮಾನ್ಯ ಕಾರ್ಡ್‌ಗಳಿಗೆ ₹100 ರಿಂದ ₹250 ವರೆಗೆ ಇರುತ್ತದೆ, ಆದರೆ ಆರಮ್ ಕಾರ್ಡ್‌ಗಳಿಗೆ ₹1,500 ಆಗಿದೆ. ವಿದೇಶದಲ್ಲಿ ತುರ್ತು ಕಾರ್ಡ್ ಬದಲಿ ಅಗತ್ಯವಿದ್ದರೆ, ವಾಸ್ತವಿಕ ವೆಚ್ಚವನ್ನು ವಿಧಿಸಲಾಗುತ್ತದೆ (ವೀಸಾಗೆ ಕನಿಷ್ಠ $175 ಮತ್ತು ಮಾಸ್ಟರ್‌ಕಾರ್ಡ್‌ಗೆ $148).

ವಿಳಂಬ ಪಾವತಿ ಶುಲ್ಕಗಳ ವಿವರ

ನಿಗದಿತ ದಿನಾಂಕದೊಳಗೆ ಕನಿಷ್ಠ ಬಾಕಿ ಮೊತ್ತ (MAD) ಪಾವತಿಸದಿದ್ದರೆ ಈ ಕೆಳಗಿನ ವಿಳಂಬ ಶುಲ್ಕಗಳು ಅನ್ವಯಿಸುತ್ತವೆ: ₹0 - ₹500 ಬಾಕಿ ಮೊತ್ತಕ್ಕೆ ಶುಲ್ಕವಿಲ್ಲ. ಬಾಕಿ ಮೊತ್ತ > ₹500 ರಿಂದ ₹1,000 ವರೆಗೆ ₹400; > ₹1,000 ರಿಂದ ₹10,000 ವರೆಗೆ ₹750; > ₹10,000 ರಿಂದ ₹25,000 ವರೆಗೆ ₹950; > ₹25,000 ರಿಂದ ₹50,000 ವರೆಗೆ ₹1,100; ಮತ್ತು ₹50,000 ಕ್ಕಿಂತ ಹೆಚ್ಚಿನ ಬಾಕಿ ಮೊತ್ತಕ್ಕೆ ₹1,300 ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ, ಸತತ ಎರಡು ಬಿಲ್ಲಿಂಗ್ ಚಕ್ರಗಳಿಗೆ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸದಿದ್ದರೆ ₹100 ಹೆಚ್ಚುವರಿ ವಿಳಂಬ ಶುಲ್ಕವನ್ನು ವಿಧಿಸಲಾಗುತ್ತದೆ, ಇದು MAD ಸಂಪೂರ್ಣವಾಗಿ ಕ್ಲಿಯರ್ ಆಗುವವರೆಗೆ ಪ್ರತಿ ಪಾವತಿ ಚಕ್ರಕ್ಕೂ ಅನ್ವಯಿಸುತ್ತದೆ.

ನವೆಂಬರ್ 1 ರಿಂದ ಈ ಹೊಸ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಯೋಜಿಸುವುದು ಸೂಕ್ತ.

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌ :ಯಾವ ಹುದ್ದೆಗೆ ಎಷ್ಟು ವಯೋಮಿತಿ ಏರಿಕೆ..?


ಯಾರಿಗೆ ಲಾಭ?

ಈ ಆದೇಶವು ರಾಜ್ಯ ಸರ್ಕಾರದ ಎಲ್ಲಾ ನೇರ ನೇಮಕಾತಿ ಹುದ್ದೆಗಳಿಗೆ ಅನ್ವಯಿಸುತ್ತದೆ. ಸಾಮಾನ್ಯ, OBC, SC, ST ಸೇರಿದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು. ಆದಾಗ್ಯೂ, ಒಬ್ಬ ಅಭ್ಯರ್ಥಿಗೆ ಈ ಸವಲತ್ತು ಕೇವಲ ಒಮ್ಮೆ ಮಾತ್ರ ಅನ್ವಯಿಸಲಿದೆ ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಹಲವು ವರ್ಷಗಳಿಂದ ರಾಜ್ಯ ಸರ್ಕಾರವು ನೇರ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸದ ಕಾರಣ, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಅನೇಕ ಯುವಕರು ವಯೋಮಿತಿ ಮೀರಿದ ತೊಂದರೆಯನ್ನು ಎದುರಿಸುತ್ತಿದ್ದರು. ಈ ನಿರ್ಣಯವು ಅಂತಹ ಎಲ್ಲಾ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.

ಯಾವ ಹುದ್ದೆಗೆ ಎಷ್ಟು ವಯೋಮಿತಿ?

ವಿವಿಧ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯ ವಿವರ ಈ ಕೆಳಗಿನಂತಿದೆ:

  • ಸಾಮಾನ್ಯ ನೇಮಕಾತಿಗಳು:

    • ಸಾಮಾನ್ಯ ವರ್ಗ: 35 ವರ್ಷ → 38 ವರ್ಷ

    • OBC ವರ್ಗ: 38 ವರ್ಷ → 41 ವರ್ಷ

    • SC, ST ವರ್ಗ: 40 ವರ್ಷ → 43 ವರ್ಷ

  • ಶಿಕ್ಷಕರ ನೇಮಕಾತಿ:

    • ಸಾಮಾನ್ಯ ವರ್ಗ: 40 ವರ್ಷ → 43 ವರ್ಷ

    • SC, ST, OBC ವರ್ಗ: 42 ವರ್ಷ → 45 ವರ್ಷ

  • SDA, FDA, ಗ್ರೂಪ್ ಸಿ ಹುದ್ದೆಗಳು:

    • ಸಾಮಾನ್ಯ ವರ್ಗ: 37 ವರ್ಷ → 40 ವರ್ಷ

    • SC, ST, OBC ವರ್ಗ: 35 ವರ್ಷ → 38 ವರ್ಷ

  • ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ:

    • ಸಾಮಾನ್ಯ ವರ್ಗ: 25 ವರ್ಷ → 28 ವರ್ಷ

    • SC, ST, OBC ವರ್ಗ: 27 ವರ್ಷ →30 ವರ್ಷ

  • ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಹುದ್ದೆ:

    • ಸಾಮಾನ್ಯ ವರ್ಗ: 30 ವರ್ಷ → 33 ವರ್ಷ

    • SC, ST, OBC ವರ್ಗ: 32 ವರ್ಷ → 35 ವರ್ಷ

  • ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (KAS) ಹುದ್ದೆ:

    • SC, ST, OBC ವರ್ಗ: 40 ವರ್ಷ → 43 ವರ್ಷ (ಸಾಮಾನ್ಯ ವರ್ಗದ ವಯೋಮಿತಿ ಇಲ್ಲಿ ನೀಡಿಲ್ಲ)

ಈ ನಿರ್ಣಯವು ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಯುವಜನರಲ್ಲಿ ಹೊಸ ಉತ್ಸಾಹ ಮತ್ತು ಉತ್ತೇಜನವನ್ನು ಸೃಷ್ಟಿಸಿದೆ. 'ವಯೋಮಿತಿ ಮೀರಿ ಹೋಗುತ್ತದೆ' ಎಂಬ ಭಯವಿಲ್ಲದೆ, ಅವರು ಈಗ ಹೆಚ್ಚು ಶಾಂತಮನಸ್ಸಿನಿಂದ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಾಧ್ಯವಾಗುತ್ತದೆ. ಇದು ಅವರಿಗೆ ನೀಡಲಾದ ಒಂದು ಹೆಚ್ಚುವರಿ ಅವಕಾಶವಾಗಿದ್ದು, ಅವರ ಪರಿಶ್ರಮಕ್ಕೆ ಬಹುಮಾನದಂತಿದೆ.

ಮುಖ್ಯ ಅಂಶಗಳು:

  • ಈ ಆದೇಶವು 2027 ಡಿಸೆಂಬರ್ 31ರ ವರೆಗೆ ಮಾನ್ಯವಾಗಿರುತ್ತದೆ.

  • ಸವಲತ್ತು ಒಬ್ಬ ಅಭ್ಯರ್ಥಿಗೆ ಒಮ್ಮೆ ಮಾತ್ರ ಲಭ್ಯ.

  • ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿದ್ದಾರೆ.

  • ಇದು ರಾಜ್ಯ ಸರ್ಕಾರದ ನೇರ ನೇಮಕಾತಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ.


ಮಂಗಳವಾರ, ಸೆಪ್ಟೆಂಬರ್ 9, 2025

ಭಾರತದ ಉಪರಾಷ್ಟ್ರಪತಿಯಾಗಿ (Vice President) ಸಿ.ಪಿ. ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಸಿ.ಪಿ ರಾಧಾಕೃಷ್ಣನ್ (CP Radhakrishnan)

ಭಾರತದ ಉಪರಾಷ್ಟ್ರಪತಿಯಾಗಿ (Vice President) ಸಿ.ಪಿ. ರಾಧಾಕೃಷ್ಣನ್ ಆಯ್ಕೆಯಾಗಿದ್ದಾರೆ. ಸಿ.ಪಿ ರಾಧಾಕೃಷ್ಣನ್ (CP Radhakrishnan) ಅವರ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ. ಸಿ.ಪಿ ರಾಧಾಕೃಷ್ಣನ್ ಅವರು ಮೇ 4, 1957ರಂದು ತಮಿಳುನಾಡಿನ ತಿರುಪುರದಲ್ಲಿ ಜನಿಸಿದರು.

1973ರಲ್ಲಿ 16ನೇ ವಯಸ್ಸಿನಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನೊಂದಿಗೆ ಸಂಬಂಧ ಹೊಂದಿದ್ದರು. ಬಿಜೆಪಿಯಿಂದ ಪ್ರಾರಂಭಿಸಿ ಅಂತಿಮವಾಗಿ ಬಿಜೆಪಿಗೆ ಸೇರಿದ ರಾಧಾಕೃಷ್ಣನ್, ಬಿಜೆಪಿಯ ಮೂಲ ಮೌಲ್ಯಗಳಲ್ಲಿ ಬೇರೂರಿರುವ ಬಲವಾದ ರಾಜಕೀಯ ನೆಲೆಯನ್ನು ನಿರ್ಮಿಸಿದರು.

ಸಿ.ಪಿ ರಾಧಾಕೃಷ್ಣನ್ ಅವರ ಸಂಸದೀಯ ವೃತ್ತಿಜೀವನವು 1998ರಲ್ಲಿ ಪ್ರಾರಂಭವಾಯಿತು. ಆಗ ಅವರು ಬಿಜೆಪಿ ಅಭ್ಯರ್ಥಿಯಾಗಿ ಕೊಯಮತ್ತೂರು ಕ್ಷೇತ್ರವನ್ನು ಗೆದ್ದರು. 1999ರಲ್ಲಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡರು. 1998ರಲ್ಲಿ 1.5 ಲಕ್ಷಕ್ಕೂ ಹೆಚ್ಚು ಮತಗಳ ಬಹುಮತ ಮತ್ತು 1999ರಲ್ಲಿ ಸುಮಾರು 55,000 ಮತಗಳನ್ನು ಗಳಿಸಿದರು. ಇದು ಈ ಪ್ರದೇಶದಲ್ಲಿ ಬಿಜೆಪಿಯ ಉಪಸ್ಥಿತಿಯನ್ನು ಗಮನಾರ್ಹವಾಗಿ ಬಲಪಡಿಸಿತು.

ಬಿಜೆಪಿಯೊಳಗೆ ಸಿ.ಪಿ ರಾಧಾಕೃಷ್ಣನ್ ಅವರ ಪ್ರಭಾವ ಸ್ಥಿರವಾಗಿ ಬೆಳೆಯಿತು. ಇದರಿಂದ 2004ರಿಂದ 2007ರವರೆಗೆ ಬಿಜೆಪಿ ತಮಿಳುನಾಡಿನ ಅಧ್ಯಕ್ಷರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಅವರು ಭಾರತೀಯ ನದಿಗಳನ್ನು ಜೋಡಿಸುವುದು, ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುವುದು ಮತ್ತು ಭಯೋತ್ಪಾದನೆಯನ್ನು ಎದುರಿಸುವಂತಹ ಕಾರಣಗಳಿಗಾಗಿ ಪ್ರಚಾರ ಮಾಡಲು 93 ದಿನಗಳ ರಥಯಾತ್ರೆಯನ್ನು ಕೈಗೊಂಡರು.

2004ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬಿಜೆಪಿಯೊಂದಿಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿದ ನಂತರ ತಮಿಳುನಾಡಿನಲ್ಲಿ ಎನ್‌ಡಿಎಯ ಮೈತ್ರಿಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಸಿ.ಪಿ.ರಾಧಾಕೃಷ್ಣನ್ ಪೂರ್ಣ ಹೆಸರು ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್. ಅವರು 1957ರ ಅಕ್ಟೋಬರ್ 20ರಂದು ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಜನಿಸಿದರು. ಆರ್‌ಎಸ್‌ಎಸ್ ಕಾರ್ಯಕರ್ತ, ಬಿಜೆಪಿ ನಾಯಕ ರಾಧಾಕೃಷ್ಣನ್ 17ನೇ ವಯಸ್ಸಿನಲ್ಲಿ ಆರ್‌ಎಸ್‌ಎಸ್ ಸೇರ್ಪಡೆಯಾಗಿದ್ದರು. ಬಿಬಿಎ ವ್ಯಾಸಂಗ ಮಾಡಿರುವ ಸಿ.ಪಿ.ರಾಧಾಕೃಷ್ಣನ್ ತಮಿಳುನಾಡಿನಾದ್ಯಂತ 93 ದಿನ 19,000 ಕಿ.ಮೀ ರಥಯಾತ್ರೆ ನಡೆಸಿದರು. ನದಿ ಜೋಡಣೆ ಮತ್ತು ಭಯೋತ್ಪಾದನೆ ನಿಗ್ರಹ , ಸಾಮಾಜಿಕ ಸುಧಾರಣೆ, ಮಾದಕವಸ್ತು ವಿರೋಧಿ ಅಭಿಯಾನ ನಡೆಸಿದರು.

1998ರಲ್ಲಿ ರಾಧಾಕೃಷ್ಣನ್ ಕೊಯಮತ್ತೂರು ಕ್ಷೇತ್ರದಿಂದ ಸಂಸತ್‌ ಪ್ರವೇಶಿಸಿದ್ದರು. ಏಕಾಂಗಿಯಾಗಿ ಬಿಜೆಪಿಯಿಂದ ಸ್ಪರ್ಧಿಸಿ 3.9 ಲಕ್ಷ ಮತ ಪಡೆದಿದ್ದರು. 2020ರಿಂದ 22ರವರೆಗೆ ಬಿಜೆಪಿಯ ಕೇರಳದ ಉಸ್ತುವಾರಿಯಾಗಿದ್ದರು. ತೆಲಂಗಾಣದ ರಾಜ್ಯಪಾಲರಾಗಿದ್ದ ಸಿ.ಪಿ.ರಾಧಾಕೃಷ್ಣನ್ ತೆಲಂಗಾಣದ ರಾಜ್ಯಪಾಲರಾಗಿ ತಮ್ಮ ಮೊದಲ 4 ತಿಂಗಳುಗಳಲ್ಲೇ ಎಲ್ಲಾ 24 ಜಿಲ್ಲೆಗಳಲ್ಲಿ ಸಿ.ಪಿ.ರಾಧಾಕೃಷ್ಣನ್ ಪ್ರವಾಸ ಮಾಡಿದ್ದರು. ಪುದುಚೇರಿ ಎಲ್‌ಜಿ ಆಗಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದ್ದರು. 2024ರ ಜುಲೈರಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ರಾಧಾಕೃಷ್ಣನ್ ಅವರಿಗೆ ಉಪರಾಷ್ಟ್ರಪತಿ ಪಟ್ಟ ಒಲಿದಿದೆ.

ಗುರುವಾರ, ಆಗಸ್ಟ್ 28, 2025

co-operation bank Bangalore

manu chart BCWDHW2077

2024-2025ನೇ ಸಾಲಿನಲ್ಲಿ ಇಲಾಖವಾರು ಮತ್ತು ವರ್ಗವಾರು ಖಾಲಿಯಿರುವ ಹುದ್ದೆಗಳು

 

2024-2025ನೇ ಸಾಲಿನಲ್ಲಿ ಇಲಾಖವಾರು ಮತ್ತು ವರ್ಗವಾರು ಖಾಲಿಯಿರುವ ಹುದ್ದೆಗಳು

ಕ್ರ ಸಂಖ್ಯೆ

ಇಲಾಖೆ

ಎ ವರ್ಗ

ಬಿ ವರ್ಗ

ಸಿ ವರ್ಗ

ಡಿ ವರ್ಗ

ಒಟ್ಟು ಖಾಲಿ ಇರುವ ಹುದ್ದೆ

1

ಕೃಷಿ

286

3033

2280

1174

6773

2

ಪಶು ಸಂಗೋಪನೆ

1451

35

3216

6051

10755

3

ಹಿಂದುಳಿದ ವರ್ಗ

21

135

1855

6323

8334

4

ಸಹಕಾರ

54

226

3388

1187

4855

5

ಸಿಬ್ಬಂದಿ & ಆಡಳಿತ ಸುಧಾರಣ ಇಲಾಖೆ

353

298

3858

1682

5191

6

ಪರಿಸರ & ಜೀವಶಾಸ್ತ್ರ

5

-2

3

0

6

7

ಇ-ಆಡಳಿತ

43

25

3

0

71

8

ಇಂಧನ

60

60

85

42

247

9

ಆರ್ಥಿಕ

335

488

6622

2091

9536

10

ಮೀನುಗಾರಿಕೆ

13

87

117

642

859

11

ಆಹಾರ & ನಾಗರಿಕ ಸರಬರಾಜು

20

72

990

313

1395

12

ಅರಣ್ಯ

122

178

4066

1981

6337

13

ಕೈಮಗ್ಗ ‍ ‍& ಜವಳಿ

3

2

38

7

50

14

ಉನ್ನತ ಶಿಕ್ಷಣ

4090

128

4000

5009

13227

15

ಒಳಾಡಳಿತ

465

731

23076

1898

26168

16

ತೋಟಗಾರಿಕೆ

24

-19

-248

3212

2969

17

ವಾರ್ತೆ

32

10

198

88

328

18

ಕನ್ನಡ & ಸಂಸ್ಕೃತಿ

15

62

166

188

432

19

ಮಾಹಿತಿ ತಂತ್ರಜ್ಞಾನ

-6

21

23

11

61

20

ಕಾರ್ಮಿಕ

295

65

1268

985

432

21

ಮಾಹಿತಿ ತಂತ್ರಜ್ಞಾನ & ಮಾನವ ಹಕ್ಕು ಇಲಾಖೆ

2706

177

-170

5140

7853

22

ಭಾರಿ & ಮಧ್ಯಮ ಕೈಗಾರಿಕೆ

21

81

191

86

379

23

ಭಾರಿ ನೀರಾವರಿ

107

29

334

131

601

24

ಆರೋಗ್ಯ ‍ ‍‍& ವೈದ್ಯಕೀಯ ಶಿಕ್ಷಣ

2488

1231

19470

13880

37069

25

ಗಣಿ

17

120

325

191

653

26

ಸಣ್ಣ ನೀರಾವರಿ

107

154

703

273

1237

27

ಅಲ್ಫ ಸಂಖ್ಯಾತರ ಕಲ್ಯಾಣ ಇಲಾಖೆ

86

511

1179

2383

4157

28

ಸಂಸದೀಯ ವ್ಯವಹಾರಗಳು

64

14

291

139

508

29

ಯೋಜನೆ, ಸಾಂಖ್ಯಿಕ, ವಿಜ್ಷಾನ & ತಂತ್ರಜ್ಞಾನ

100

90

625

103

918

30

ಲೋಕೋಪಯೋಗಿ

257

-336

1033

447

1401

31

ಕಂದಾಯ

125

435

6690

3895

11145

32

ಗ್ರಾಮೀಣ ಅಭಿವೈಧ್ದಿ ಪಂಚಾಯತ ರಾಜ ಇಲಾಖೆ

463

920

7898

1617

10898

33

ಪರಿಶಿಷ್ಷ ಜಾತಿಗಳ ಕಲ್ಯಾಣ

86

69

1932

7893

9980

34

ಶಾಲಾ ಶಿಕ್ಷಣ & ಸಾಕ್ಷರತೆ

998

6155

60219

3355

40727

35

ರೇಷ್ಮೆ

35

322

2511

354

3222

36

ಕೌಶಲ್ಯ ಅಭಿವೈಧ್ಧಿ ಉನ್ನತ ಜೀವನ ಕಲ್ಯಾಣ

95

449

2133

1246

3923

37

ಸಣ್ಣ ಕೈಗಾರಿಕೆ

10

62

40

43

365

38

ಪರಿಶಿಷ್ಷ ಪಂಗಡಗಳ ಕಲ್ಯಾಣ ಇಲಾಖೆ

113

12

775

1629

2429

39

ಸಾರಿಗೆ

33

230

1058

320

1641

40

ನಗರಾಭಿವೃದ್ಧಿ ಇಲಾಖೆ

245

76

497

67

885

41

ಮಹಿಳಾ &ಮಕ್ಕಳ ಕಲ್ಯಾಣ ಇಲಾಖೆ

233

246

2755

1310

4544

42

ಯುವಜನ ಸೇವೆಗಳು

17

12

98

85

212

43

TOTAL

16017

16734

16604

77614

276386

44

GROUP

A

B

C

D

TOTAL

 

SBI scholarship

http://somalinggovernmentemployees76.blogspot.com/2025/10/blog-post_21.html

BCMHOSTEL2077